IFRAME SYNC IFRAME SYNC IFRAME SYNC IFRAME SYNC

Tuesday, June 1, 2021

ವಿಷ್ಣು ದೇವರ ಮಹೀಮ

 *ವಿಷ್ಣು_ವೈಷ್ಣ್ವಮಹಾತ್ಮೆ_ಬ್ರಹ್ಮವೈವರ್ತಪುರಾಣದಲ್ಲಿ*


ಅಷ್ಟಾದಶಪುರಾಣಗಳಲ್ಲಿ ಬ್ರಹ್ಮವೈವರ್ತಪುರಾಣವು ಒಂದು. ವಿಭಾಗದಲ್ಲಿ ರಾಜಸಪುರಾಣವಾಗಿದ್ದರೂ ವಿಷ್ಣು ಮತ್ತು ವೈಷ್ಣವಮಾಹಾತ್ಮೆಯು ಪುರಾಣದುದ್ದಕ್ಕೂ ಕಾಣಸಿಗುತ್ತದೆ. ಶ್ರೀಮದಾಚಾರ್ಯರು ಕೂಡಾ ಬ್ರಹ್ಮವೈವರ್ತಪುರಾಣದ ವಾಕ್ಯಗಳನ್ನು ಬ್ರಹ್ಮಸೂತ್ರಾದಿ ಭಾಷ್ಯಗಳಲ್ಲಿ ಉದಾಹರಿಸಿರುತ್ತಾರೆ.


*ನಾಸ್ತಿ ಗಙ್ಗಾಸಮಂ ತೀರ್ಥಂ ನ ಚ ಕೃಷ್ಣಾತ್ಪರಃ ಸುರಃ |*

*ನ ಶಙ್ಕರಾದ್ವೈಷ್ಣವಶ್ಚ ನ ಸಹಿಷ್ಣುರ್ಧರಾ ಪರಾ || ೧೬ ||*


ಗಂಗೆಗೆ ಸಮವಾದ ತೀರ್ಥವಿಲ್ಲ, ನಾರಾಯಣನಿಗಿಂತ ಹಿರಿಯರು ಸರಿಸಮಾನರು ಯಾರೂ ಇಲ್ಲ. ಶಿವನಿಗೆ ಸಮರಾದ ವೈಷ್ಣವನಿಲ್ಲ, ಧರೆಗಿಂತ ಬೇರೆ ಸಹಿಷ್ಣುಗಳು ಇಲ್ಲ. ( *ಇದು ಭಗವಂತನ ಕುರಿತಾದ ಹಿರಿತನ*)

ಬ್ರಹ್ಮದೇವರು ತಿಳಿಸುವ ಭಗವಂತನ ಮಹಿಮೆ -


*ಅಹಂ ಸ್ರಷ್ಟಾ ಚ ಜಗತಾಂ ವಿಧಾತಾ ಸಂಹರೋ ಹರಃ |*

*ಧರ್ಮಶ್ಚ ಕರ್ಮಣಾಂ ಸಾಕ್ಷೀ ಯಸ್ಯಾಜ್ಞಾಪರಿಪಾಲಕಃ || ೧೯ ||* 

*ಕಾಲಃ ಸಂಹರತೇ ಲೋಕಾನ್ಯಮಃ ಶಾಸ್ತಾ ಚ ಪಾಪಿನಾಮ್ |*

*ಉಪೈತಿ ಮೃತ್ಯುಃ ಸರ್ವಾಂಶ್ಚ ಭಿಯಾ ಯಸ್ಯಾಜ್ಞಯಾ ಸದಾ || ೨೦ ||*

*ಸರ್ವೇಶಾ ಯಾ ಚ ಸರ್ವಾದ್ಯಾ ಪ್ರಕೃತಿಃ ಸರ್ವಸೂಃ ಪುರಾ |* 

*ಸಾ ಭೀತಾ ಯಸ್ಯ ಪುರತೋ ಯಸ್ಯಾಜ್ಞಾಪರಿಪಾಲಿಕಾ || ೨೧ ||*


ಸೃಷ್ಟಿಕರ್ತನಾದ ನಾನು,  ಲಯಕಾರಕನಾದ ಶಿವ, ಕರ್ಮಸಾಕ್ಷಿಯಾದ ಧರ್ಮ, ಲೋಕಸಂಹಾರಕನಾದ ಕಾಲ, ಶಿಕ್ಷೆ ಕೊಡುವ ಯಮ, ಎಲ್ಲರನ್ನು ಸೆಳೆದೊಯ್ಯುವ ಮೃತ್ಯು, ಎಲ್ಲಕ್ಕೂ ಒಡತಿ ನಿಯಾಮಕಳಾದ ದುರ್ಗೆಯೂ, ಎಲ್ಲರೂ ವಿಷ್ಣುವಿನ ಭಯದಿಂದ ಅವನ ಆಜ್ಞೆಯಂತೆ ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತಾರೆ ( *ಶ್ರುತಿಯ ಅಭಿಪ್ರಾಯವೇ ಇಲ್ಲಿ ಬಂದಿದೆ*).


*ಈಶ್ವರೇ ಚ ಸ್ಥಿತೇ ದೇಹೀ ಕ್ಷಮಶ್ಚ ಸರ್ವಕರ್ಮಸು |*

*ಗತೇಽಸ್ಪೃಶ್ಯಃ ಶವಸ್ತ್ಯಾಜ್ಯಃ ಕಸ್ತಂ ದೇಹೀ ನ ಮನ್ಯತೇ || ೨೯ ||*


ನಾರಾಯಣನು ದೇಹದಲ್ಲಿದ್ದಾಗ ಮಾತ್ರ ದೇಹೀ ಅರ್ತಾತ್ ಜೀವನು ತನ್ನ ಎಲ್ಲಾ ಕಾರ್ಯಗಳನ್ನು ಮಾಡಲು ಸಮರ್ಥನು. ದೇಹದಿಂದ ಬಿಟ್ಟುಹೋದಾಕ್ಷಣ ದೇಹವು ಶವವೆನಿಸಿ ತ್ಯಾಜ್ಯವೆನಿಸುತ್ತದೆ. ಅಂತಹ ಭಗವಂತನ ಜೀವ ಹೇಗೆ ಮರೆಯಬಲ್ಲ ?  ( *ಜೀವಬ್ರಹ್ಮರ ನಡುವಿನ ಬೇಧ ಮತ್ತು ಜೀವಾತ್ಮನ ಅಸ್ವತಂತ್ರತೆ ಪರಮಾತ್ಮನ ಸ್ವತಂತ್ರತ್ವವ ತಿಳಿಸುತ್ತಿದೆ*). ಶಿವನು ಹೇಳುತ್ತಾನೆ -


*ಸ್ವಯಂ ಬ್ರಹ್ಮಾ ಚ ಜಗತಾಂ ವಿಧಾತಾ ಸರ್ವಕಾರಕಃ |*

*ಪಾದಾರವಿನ್ದಮನಿಶಂ ಧ್ಯಾಯತೇ ದ್ರಷ್ಟುಮಕ್ಷಮಃ || ೩೦ ||*

*ಯುಗಲಕ್ಷಂ ತಪಸ್ತಪ್ತಂ ಶ್ರೀಕೃಷ್ಣಸ್ಯ ಚ ವೇಧಸಾ |*

*ತದಾ ಬಭೂವ ಜ್ಞಾನೀ ಚ ಜಗತ್ಸ್ರಷ್ಟುಂ ಕ್ಷಮಸ್ತದಾ || ೩೧ ||*


ಸ್ವತಃ ಸೃಷ್ಟಿಕರ್ತನಾದ ಬ್ರಹ್ಮನೂ ಹರಿಯಪಾದಾರವಿಂದವನ್ನು ನೋಡಲು ಅಶಕ್ತನಾಗಿ ಧ್ಯಾನಿಸುತ್ತಾನೆ. ಒಂದು ಲಕ್ಷಯುಗಗಳ ಕಾಲ ಹರಿಯ ಕುರಿತು ತಪಸ್ಸು ಮಾಡಿ ಜಗತ್ಸೃಷ್ಟಿಯನ್ನು ಮಾಡುವ  ಸಾಮರ್ಥ್ಯವನ್ನು ಹೊಂದಿದ್ದಾನೆ. 


ಶಿವನ ಮಾತು -


*ಅಸಂಖ್ಯಕಾಲಂ ಸುಚಿರಂ ತಪಸ್ತಪ್ತಂ ಹರೇರ್ಮಯಾ |*

*ತೃಪ್ತಿಂ ಜಗಾಮ ನ ಮನಸ್ತೃಪ್ಯತೇ ಕೇನ ಮಙ್ಗಲೇ ||೩೨||*

*ಅಧುನಾ ಪಞ್ಚವಕ್ತ್ರೇಣ ಯನ್ನಾಮಗುಣಕೀರ್ತನಮ್ |*

*ಗಾಯನ್ಭ್ರಮಾಮಿ ಸರ್ವತ್ರ ನಿಸ್ಪೃಹಃ ಸರ್ವಕರ್ಮಸು || ೩೩ ||*

*ಮತ್ತೋ ಯಾತಿ ಚ ಮೃತ್ಯುಶ್ಚ ಯನ್ನಾಮಗುಣಕೀರ್ತ್ತನಾತ್ |*

*ಶಶ್ವಜಪನ್ತಂ ತನ್ನಾಮ ದೃಷ್ಟ್ವಾ ಮೃತ್ಯುಃ ಪಲಾಯತೇ || ೩೪ ||*

*ಸರ್ವಬ್ರಹ್ಮಾಣ್ಡಸಂಹರ್ತ್ತಾಽಪ್ಯಹಂ ಮೃತ್ಯುಂಜಯಾಭಿಧಃ |*

*ಸುಚಿರಂ ತಪಸಾ ಯಸ್ಯ ಗುಣನಾಮಾನುಕೀರ್ತ್ತನಾತ್ || ೩೫ ||*

*ಕಾಲೇ ತತ್ರ ವಿಲೀನೋಽಹಮಾವಿರ್ಭೂತಸ್ತತಃ ಪುನಃ |*

*ನ ಕಾಲೋ ಮಮ ಸಂಹರ್ತ್ತಾ ನ ಮೃತ್ಯುರ್ಯತ್ಪ್ರಸಾದತಃ ||೩೬||*


ನಾನು (ಶಿವನೂ) ಕೂಡಾ ಲೆಕ್ಕವಿಲ್ಲದಷ್ಟು ಕಾಲ ಹರಿಯ ಕುರಿತು ತಪಸ್ಸು ಮಾಡಿದ್ದೇನೆ. ಆದರೆ ನನಗೆ ಇನ್ನೂ ಅದು ಸಾಕೆನಿಸಿಲ್ಲ. ಶ್ರೇಯಸ್ಸು ಎಷ್ಟು ದೊರೆತರು ಯಾರಿಗೆ ತೃಪ್ತಿಯಾಗುತ್ತದೆ !. ಆದ್ದರಿಂದ ನಾನು ಈಗಲೂ ನನ್ನ ಐದುಮುಖಗಳಿಂದ ಹರಿನಾಮವನ್ನು ಸಂಕೀರ್ತನೆಮಾಡುತ್ತಾ ಎಲ್ಲಡೆ ಸಂಚರಿಸುತ್ತಿದ್ದೇನೆ.  ಆ ಕೀರ್ತನದ ಬಲದಿಂದಲೇ ನಾನು ಸರ್ವಸಂಹಾರಕ, ಮೃತ್ಯುಂಜಯನೆನಿಸಿದ್ದೇನೆ. ನನ್ನ ನೋಡಿದರೆ ಮೃತ್ಯುವು ಪಲಾಯಯನ ಮಾಡುತ್ತಾನೆ. ಆದರೆ ಪ್ರಳಯಕಾಲದಲ್ಲಿ ನಾನು ಅವನ್ನಲ್ಲಿ ಸೇರಿ ಮತ್ತೆ ಸೃಷ್ಟಿಯಕಾಲದಲ್ಲಿ ಹುಟ್ಟುವವನಾಗಿದ್ದೇನೆ. ಹರಿಯ ಅನುಗ್ರಹದಿಂದ ಕಾಲನಾಗಲಿ ಮೃತ್ಯುವಾಗಲಿ ನನ್ನ ಸಂಹರಿಸರಾಲರರು ( *ಹರಿಸರ್ವೋತ್ತಮತ್ವವು ಬ್ರಹ್ಮ ಮತ್ತು ಶಿವರ ಮಾತುಗಳಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ*).  


*ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋಽಪಿ ವಾ |* 

*ಯಃ ಸ್ಮರೇತ್ಪುಣ್ಡರೀಕಾಕ್ಷಂ ಸ ಬಾಹ್ಯಾಭ್ಯನ್ತರಃ ಶುಚಿಃ ||೧೭||*


ಶುದ್ದನಾಗರಲಿ ಅಶುದ್ಧಿ ಇರುವವನಾಗಿರಲಿ,  ಯಾವ ಅವಸ್ಥೆಯಲ್ಲಾದರು ಇರಲಿ ಪುಂಡರೀಕಾಕ್ಷನನ್ನು ಸ್ಮರಿಸಿದಾಕ್ಷಣ ಒಳಗಿನಿಂದಲೂ ಹೊರಗಿನಿಂದಲೂ ಶುಚಿಯಾಗುತ್ತಾನೆ. 


*ಕರ್ಮಾರಮ್ಭೇ ಚ ಮಧ್ಯೇ ಚ ಶೇಷೇ ವಿಷ್ಣುಂ ಚ ಯಃ ಸ್ಮರೇತ್ |*

*ಪರಿಪೂರ್ಣಂ ತಸ್ಯ ಕರ್ಮ ವೈದಿಕಂ ಚ ಭವೇದ್ದ್ವಿಜ || ೧೮ ||*


ದ್ವಿಜನೇ ಕರ್ಮಾರಂಭದಲ್ಲಿ, ಮಧ್ಯದಲ್ಲಿ ಮತ್ತು ಕೊನೆಯಲ್ಲಿ ವಿಷ್ಣುವನ್ನು ಸ್ಮರಿಸಿ ಕರ್ಮವನ್ನು ಮಾಡಿದರೆ ಆ ಕರ್ಮವು ಪರಿಪೂರ್ಣವು ವೈದಿಕವೂ ಎನಿಸುವುದು

*ವ್ರತಂ ದಾನಂ ಪ್ರತಿಷ್ಠಾ ಚ ಶ್ರಾದ್ಧಂ ಚ ದೇವಪೂಜನಮ್ |* 

*ಶಾಲಗ್ರಾಮಶಿಲಾಯಾಶ್ಚೈವಾಧಿಷ್ಠಾನಾತ್ಪ್ರಶಸ್ತಕಮ್ || ೮೧ ||*


ವ್ರತವಾಗಲಿ, ದಾನವಾಗಲಿ, ಪ್ರತಿಷ್ಠೆಯಾಗಲಿ ಶ್ರಾದ್ಧವಾಗಲಿ ದೇವತಾರ್ಚನೆಯಾಗಲಿ ಶಾಲಗ್ರಾಮವಿಲ್ಲದೆ ಮಾಡಿದರೆ ಅದು ಪ್ರಶಸ್ತವಲ್ಲ ( *ವೈದಿಕಕರ್ಮಗಳಲ್ಲಿ ಶಾಲಗ್ರಾಮದ ಪ್ರಾಮುಖ್ಯತೆ ಹೇಳುತ್ತದೆ*).  


*ಸೇವತೇ ಪ್ರಕೃತಿಂ ಯೋ ಹಿ ಭಕ್ತ್ಯಾ ಜನ್ಮನಿ ಜನ್ಮನಿ |*

*ಸ ಲಭೇತ್ಸುನ್ದರೀಂ ಕಾನ್ತಾಂ ವಿನೀತಾಂ ಚ ಗುಣಾನ್ವಿತಾಮ್ || ೩೩ ||* 

*ಶ್ರಿಯಂ ಚ ನಿಶ್ಚಲಾಂ ಪುತ್ರಂ ಪೌತ್ರಂ ಭೂಮಿಂ ಧನಂ ಪ್ರಜಾಮ್ |*

*ಪ್ರಕೃತೇಶ್ಚ ವರೇಣೈವ ಲಭೇದ್ಭಕ್ತೋಽವಲೀಲಯಾ || ೩೪ ||* 


ಗುಣಶೀಲ ಮಡದಿ, ಸಂಪತ್ತು, ಪುತ್ರ, ಪೌತ್ರ, ಸಂತತಿ ಭೂಮಿ ಧನ ಸಂಪತ್ತೆಲ್ಲ ದೇವಿ ದುರ್ಗೆಯ ಅನುಗ್ರಹದಿಂದ  ದೊರಕುವುದು.


*ಶಿವಂ ಶಿವಸ್ವರೂಪಂ ಚ ಶಿವದಂ ಶಿವಕಾರಣಮ್ |*

*ಜ್ಞಾನಾನನ್ದಂ ಮಹಾತ್ಮಾನಂ ಪರಂ ಮೃತ್ಯುಂಜಯಂ ಪರಮ್ ||೩೫||* 

*ತಮೀಶಂ ಸೇವತೇ ಯೋ ಹಿ ಭಕ್ತ್ಯಾ ಜನ್ಮನಿ ಜನ್ಮನಿ |* 

*ಪುಮಾನ್ಪ್ರಾಪ್ನೋತಿ ಸತ್ಕಾನ್ತಾಂ ಕಾಮಿನೀ ಚಾಪಿ ಸತ್ಪತಿಮ್ || ೩೬ ||*

*ವಿದ್ಯಾಂ ಜ್ಞಾನಂ ಸುಕವಿತಾಂ ಪುತ್ರಂ ಪೌತ್ರಂ ಪರಾಂ ಶ್ರಿಯಮ್ |*

*ಬಲಂ ಧನಂ ವಿಕ್ರಮಂ ಚ ಲಭೇದ್ಧರವರೇಣ ಸಃ || ೩೭ ||*


ಮಗಳಸ್ವರೂಪನಾದ ಮಂಗಳದಾಯಕನಾದ ಜ್ಞಾನಾನಂದಮಯವಾದ ಮೃತ್ಯುಂಜಯ ಶಿವನನ್ನು ಭಕ್ತಿಯಿಂದ ಸೇವಿಸಿದರೆ ಜನ್ಮಜನ್ಮದಲ್ಲೂ  ಪುರುಷನಿಗೆ ಒಳ್ಳೆಯ ಹೆಂಡತಿ, ಸ್ತ್ರೀಗೆ ಒಳ್ಳೆಯ ಪತಿಯೂ ಲಭಿಸುವರು. ಜೊತೆಗೆ ವಿದ್ಯೆ ಜ್ಞಾನ ಕವಿತ್ವಶಕ್ತಿ ಪುತ್ರಪೌತ್ರಾದಿ ಸಂತತಿ ಉತ್ತಮ ಸಂಪತ್ತು ಬಲ, ಧನ ಪರಾಕ್ರಮಗಳೆಲ್ಲ ದೊರಕುವುದು.


*ಬ್ರಹ್ಮಾಣಂ ಭಜತೇ ಯೋ ಹಿ ಲಭೇತ್ಸೋಽಪಿ ಪ್ರಜಾಂ ಶ್ರಿಯಮ್ |*

*ವಿದ್ಯಾಮೈಶ್ವರ್ಯ್ಯಮಾನನ್ದಂ ವರೇಣ ಬ್ರಹ್ಮಣೋ ನರಃ || ೩೮ ||*


ಬ್ರಹ್ಮನನ್ನು ಸೇವಿಸಿದರೆ ಸಂತತಿ ಸಂಪತ್ತು ವಿದ್ಯೆ ಐಶ್ವರ್ಯ ಆನಂದಗಳು ಲಭಿಸುವುದು. 


*ಯೋ ನರೋ ಭಜತೇ ಭಕ್ತ್ಯಾ ದೀನನಾಥಂ ದಿನೇಶ್ವರಮ್ |*

*ವಿದ್ಯಾಮಾರೋಗ್ಯಮಾನನ್ದಂ ಧನಂ ಪುತ್ರಂ ಲಭೇದ್ ಧುವಮ್ ||೩೯||* 


ಸೂರ್ಯನ ಉಪಾಸನೆಯಿಂದ ವಿದ್ಯೆ ಸುಖ ಆರೋಗ್ಯ ಧನ ಮತ್ತು ಪುತ್ರಪ್ರಾಪ್ತಿ.


*ಗಣೇಶ್ವರಂ ಯೋ ಭಜತೇ ದೇವದೇವಂ ಸನಾತನಮ್ |*

*ಸರ್ವಾಗ್ರಪೂಜ್ಯಂ ಸರ್ವೇಶಂ ಭಕ್ತ್ಯಾ ಜನ್ಮನಿ ಜನ್ಮನಿ ||೪೦ ||*

*ವಿಘ್ನನಾಶೋ ಭವೇತ್ತಸ್ಯ ಸ್ವಪ್ನೇ ಜಾಗರಣೇಽನಿಶಮ್ ||*

*ಪರಮಾನನ್ದಮೈಶ್ವರ್ಯ್ಯಂ ಪುತ್ರಂ ಪೌತ್ರಂ ಧನಂ ಪ್ರಜಾಃ || ೪೧ ||*  

*ಜ್ಞಾನಂ ವಿದ್ಯಾಂ ಸುಕವಿತಾಂ ಲಭತೇ ತದ್ವರೇಣ ಚ ||*


ಗಣಪತಿಯನ್ನು ಭಕ್ತ್ಯಾರಾಧನೆಗಳನ್ನು ಮಾಡಿದರೆ ನಿದ್ದೆಯಲ್ಲಾಗಲಿ ಎಚ್ಚರದಲ್ಲಾಗಲಿ ನಿರ್ವಘ್ನತೆ ಪ್ರಾಪ್ತಿಯಾಗುವುದು. ಆನಂದವು ಐಶ್ವರ್ಯ ಪುತ್ರ ಪೌತ್ರಾದಿ ಸಂತತಿ ಧನಸಂಪತ್ತು ಜ್ಞಾನ ವಿದ್ಯೆ ಕವಿತ್ವ ಶಕ್ತಿಗಳೂ ದೊರಕುವವು. 


*ಭಜತೇ ಯೋ ಹಿ ವಿಷ್ಣುಂ ಚ ಲಕ್ಷ್ಮೀಕಾನ್ತಂ ಸುರೇಶ್ವರಮ್ ||೪೨||* 

*ವರಾರ್ಥೀ ಚೇಲ್ಲಭೇತ್ಸರ್ವಂ ನಿರ್ವಾಣಮನ್ಯಥಾ ಧ್ರುವಮ್ |* 

*ಶಾನ್ತಂ ನಿಷೇವ್ಯ ಪಾತಾರಂ ಸತ್ಯಂ ಸತ್ಯಂ ಲಭೇನ್ನರಃ || ೪೩ ||* 

*ಸರ್ವಂ ತಪಃ ಸರ್ವಧರ್ಮಂ ಯಶಃ ಕೀರ್ತಿಮನುತ್ತಮಾಮ್ |* 

*ವಿಷ್ಣುಂ ನಿಷೇವ್ಯ ಸರ್ವೇಶಂ ಯೋ ಮೂಢೋ ಲಭತೇ ವರಮ್ || ೪೪ ||*


ಸರ್ವೇಶ್ವರನೂ ಲಕ್ಷ್ಮೀನಾಥನೂ ಆದ ಹರಿಯನ್ನು ಬಯಕೆ ಇಟ್ಟುಕೊಂಡು ಆರಾಧಿಸಿದರೆ ಎಲ್ಲಾ ಭೋಗವಿಷಯಗಳು ಲಭಿಸುವುದು. ಸುರೇಶ್ವರನಾದ ಮೋಕ್ಷಕೊಡುವ ವಿಷ್ಣುವನ್ನು ಭಜಿಸಿಯೂ ಯಾರು ಮುಕ್ತಿಯನ್ನು ಬೇಡದೆ ಐಹಿಕವಾದ ಯಶಸ್ಸು ಕೀರ್ತಿ ಧರ್ಮಗಳನ್ನು ಬೇಡುವನೋ ಅವನು ಮೂಢ. ಆದ್ದರಿಂದ  ಮೋಕ್ಷಕೊಡಬಲ್ಲವನಾದ ಹರಿಯನ್ನು ಸದಾ ಮೋಕ್ಷಾರ್ಥಿ ಪೂಜಿಸಬೇಕು ( *ವಿಷ್ಣು ಮೋಕ್ಷಕೊಡುವವನು ಬೇರೆಯವರು ಕೇವಲ ಐಹಿಕ ಫಲದಾತರು ಎಂಬ ವಿಚಾರ ಸ್ಪಷ್ಟವಾಗಿದೆ*)


*ಯದ್ಗರ್ಭೇ ವೈಷ್ಣವೋ ಜಾತೋ ಯಸ್ಯ ವೀರ್ಯೇಣ ವಾ ಸತಿ |*

*ತಯೋರ್ಯಾತಿ ಚ ವೈಕುಣ್ಠಂ ಪುರುಷಾಣಾಂ ಶತಂ ಶತಮ್ ||೪೪||* 


ಯಾರ ಗರ್ಭದಲ್ಲಿ ವೈಷ್ಣವನು ಹುಟ್ಟುವನೋ ಅದಕ್ಕೆ ಯಾರ ವೀರ್ಯಕಾರಣವೋ ಅವರಿಬ್ಬರೂ ವೈಕುಂಠವನ್ನು ಹೊಂದುವರು ನೂರಾರುಕಾಲ.


*ಶಾನ್ತಾಯ ಗುಣಿನೇ ಚೈವ ಯೂನೇ ಚ ವಿದುಷೇಽಪಿ ಚ |* 

*ವೈಷ್ಣವಾಯ ಸುತಾಂ ದತ್ತ್ವಾ ದಶವಾಜಿಫಲಂ ಲಭೇತ್ || ೯೭ ||*


ಶಾಂತನೂ, ಗುಣವಂತನೂ ತಿಳಿದವನೂ ಯುವಕನೂ ಆದ ವೈಷ್ಣವನಿಗೆ ಯಾರು ಕನ್ಯೆಯನ್ನು ಕೊಡುವರೋ ಅಂತವರು ಹತ್ತು ಅಶ್ವಮೇಧದ ಫಲವನ್ನು ಹೊಂದುವರು. 


*ಅವೈಷ್ಣವಾದ್ದ್ವಿಜಾದ್ವಿಪ್ರ ಚಣ್ಡಾಲೋ ವೈಷ್ಣವೋ ವರಃ |*

*ಸಗಣಃ ಶ್ವಪಚೋ ಮುಕ್ತೋ ಬ್ರಾಹ್ಮಣೋ ನರಕಂ ವ್ರಜೇತ್ || ೩೯ ||*


ಅವೈಷ್ಣವನಾದ ಬ್ರಾಹ್ಮಣನಿಗಿಂತ ಜನ್ಮತ ಚಾಂಡಾಲನಾದರು ವೈಷ್ಣವಸಂಸ್ಕಾರವನ್ನು ಹೊಂದಿದವನು ಶ್ರೇಷ್ಠ. ಯಾಕೆಂದರೆ ವೈಷ್ಣವನಾದವನು ಮೋಕ್ಷಹೊಂದುವನು. ಅವೈಷ್ಣವನಾದ ಬ್ರಾಹ್ಮಣನು ನರಕಕ್ಕೆ ಬೀಳುವನು. 


*ಹರೇರಭಕ್ತೋ ವಿಪ್ರಶ್ಚ ಸ್ವಂ ಚ ರಕ್ಷಿತುಮಕ್ಷಮಃ || ೩೯ ||*

*ಅಜ್ಞಾನಾದ್ಯದಿ ಗೃಹ್ಣಾತಿ ವಿಷ್ಣೋರ್ನಿರ್ಮಾಲ್ಯಮೇವ ಚ |*

*ಸಪ್ತಜನ್ಮಾರ್ಜಿತಾತ್ಪಾಪಾನ್ಮುಚ್ಯತೇ ನಾತ್ರ ಸಂಶಯಃ ||೪೦||* 

*ಜ್ಞಾತ್ವಾ ಭಕ್ತ್ಯಾ ಚ ಗೃಹ್ಣಾತಿ ವಿಷ್ಣೋರ್ನೈವೇದ್ಯಮೇವ ಚ |*

*ಕೋಟಿಜನ್ಮಾರ್ಜಿತಾತ್ಪಾಪಾನ್ಮುಚ್ಯತೇ ನಾತ್ರ ಸಂಶಯಃ || ೪೧ ||*


ವಿಷ್ಣುನೈವೇದ್ಯವನ್ನು ತಿಳಿದಾಗಲಿ ತಿಳಿಯದಾಗಲಿ ಸ್ವೀಕರಿಸಿದರೂ ಅವನು ಏಳು ಜನ್ಮದಿಂದ ಮಾಡಿದ ಪಾಪಪರಿಹಾರವಾಗುವುದು.


*ವಿಷ್ಣೋರ್ನಿವೇದಿತಂ ಪುಷ್ಪಂ ನೈವೇದ್ಯಂ ವಾ ಫಲಂ ಜಲಮ್ |* 

*ಪ್ರಾಪ್ತಿಮಾತ್ರೇಣ ಭೋಕ್ತವ್ಯಂ ತ್ಯಾಗೇನ ಬ್ರಹ್ಮಹಾ ಜನಃ ||೨೮||*


ವಿಷ್ಣುವಿಗೆ ನೈವೇದ್ಯಮಾಡಿದ ಪುಷ್ಪವನ್ನಾಗಲಿ ವೈವೇದ್ಯವನ್ನಾಗಲಿ ಫಲವಾಗಲಿ ಅಥವಾ ಜಲವೇ ಅಗಲಿ ನಮಗೆ ಸಿಕ್ಕಿದಾಕ್ಷಣ ಅದನ್ನು ಸ್ವೀಕರಿಸಬೇಕು ತಿರಸ್ಕರಿಸಿದರೆ ಬ್ರಹ್ಮಹತ್ಯೆಯ ಪಾಪ ಸಿಗುತ್ತದೆ. 


*ಪ್ರಯಾತಿ ಕಾಲಸೂತ್ರಂ ಚ ಭುಕ್ತ್ವಾ ಚ ಹರಿವಾಸರೇ || ೯ ||* 

*ಕೃಮಿಭಿಃ ಶಾಲಿಮಾನೈಶ್ಚ ಭಕ್ಷಿತಸ್ತತ್ರ ತಿಷ್ಠತಿ |* 

*ವಿಣ್ಮೂತ್ರಭೋಜನಂ ಕೃತ್ವಾ ಯಾವದಿನ್ದ್ರಾಶ್ಚತುರ್ದಶ || ೧೦ ||* 


ಏಕಾದಶಿಯ ದಿವಸ ಉಂಡರೆ ಕಾಲಸೂತ್ರ ನರಕವು ಪ್ರಾಪ್ತವಾಗುವುದು. ಅಂದು ತಿಂದ ಅನ್ನ ಕೃಮಿಗಳಿಂದ ಕೂಡಿದ ಮಲಮೂತ್ರಗಳಿದ್ದಂತೆ. 


*ಗೃಹೀ ಶೈವಶ್ಚ ಶಾಕ್ತಶ್ಚ ಬ್ರಾಹ್ಮಣೋ ಜ್ಞಾನದುರ್ಬಲಃ |*

*ಪ್ರಯಾತಿ ಕಾಲಸೂತ್ರಂ ಚ ಭುಕ್ತ್ವಾ ಚ ಹರಿವಾಸರೇ ||*


ಬ್ರಾಹ್ಮಣ ಗೃಹಸ್ಥ ಶೈವನಾಗಲಿ ಶಾಕ್ತನಾದರೂ ಸರಿಯೇ, ಹರಿದಿನದಲ್ಲಿ ಉಂಡರೆ ಕಾಲಸೂತ್ರನರಕಕ್ಕೆ ಬೀಳುವನು. 


*ಏಕಾದಶ್ಯಾಂ ನ ಭುಙ್ಕ್ತೇ ಯೋ ನಿತ್ಯಂ ಕೃಷ್ಣಂ ಸಮರ್ಚಯೇತ್ |*

*ತಸ್ಯ ಪಾದೋದಕಂ ಪ್ರಾಪ್ಯ ಸ್ಥಲಂ ತೀರ್ಥಂ ಭವೇದ್ ಧ್ರುವಮ್ || ೩೩ ||*


ಯಾವನು ಏಕಾದಶಿಯಂದು ಉಪವಾಸ, ನಿತ್ಯ ಭಗವಂತನ ಅರ್ಚನೆ ಮಾಡುವರೋ ಅಂತವರ ಪಾದೋದಕ ಬಿದ್ದ ಸ್ಥಳವು ಪವಿತ್ರವೆನಿಸುವುದು ಖಂಡಿತವಾಗಿಯೂ. 


*ನಾರಾಯಣೋಚ್ಛಿಷ್ಟಮಿಷ್ಟಮಭಕ್ಷ್ಯಮನಿವೇದಿತಮ್ || ೫ ||* 

*ಅನ್ನಂ ವಿಷ್ಠಾ ಜಲಂ ಮೂತ್ರಂ ಯದ್ವಿಷ್ಣೋರನಿವೇದಿತಮ್ |* 

*ವಿಣ್ಮೂತ್ರಂ ಸರ್ವಥಾ ಪ್ರೋಕ್ತಮನ್ನಂ ಚ ಹರಿವಾಸರೇ ||೬||* 


ಯಾವತ್ತೂ ನಾರಾಯನನಿಗೆ ಅರ್ಪಿಸಿದ ವಸ್ತುಗಳನ್ನೇ ಸೇವಿಸಬೇಕು. ನೈವೇದ್ಯ ಮಾಡದ ಅನ್ನವು ಮಲವಿದ್ದಂತೆ ನೀರು ಮೂತ್ರವಿದ್ದಂತೆ. ಏಕದಶಿಯಂದಂತೂ ಸರ್ವಥಾ ಅದು ವರ್ಜ್ಯ. 


*ಸಾಲೋಕ್ಯಸಾರ್ಷ್ಟಿಸಾರೂಪ್ಯಸಾಮೀಪ್ಯೈಕ್ಯಂ ಹರೇರಪಿ |*

*ದೀಯಮಾನಂ ನ ಗೃಹ್ಣನ್ತಿ ವೈಷ್ಣವಾಃ ಸೇವನಂ ವಿನಾ ||೪೦||*

*ಬ್ರಹ್ಮತ್ವಮಮರತ್ವಂ ವಾ ತುಚ್ಛಂ ಮೇನೇ ಚ ವೈಷ್ಣವಃ |*

*ಇನ್ದ್ರತ್ವಂ ವಾ ಕುಬೇರತ್ವಂ ನ ಮೇನೇ ಗಣನಾಸು ಚ || ೪೧ ||* 

*ಕೃಷ್ಣಭಕ್ತಸ್ಯ ತೇ ಕಿಂ ವಾ ದೇವಾನಾಂ ವಿಷಯೇ ಭ್ರಮೇ |* 


ವಿಷ್ಣುವಿನ ಸೇವಾಭಾಗ್ಯವಿಲ್ಲದ ಸಾಲೋಕ್ಯ, ಸಾರೂಪ್ಯ, ಸಾಮೀಪ್ಯ ಸಾಯುಜ್ಯಪದವಿಗಳಾಗಲೀ, ಬ್ರಹ್ಮ ರುದ್ರ ಇಂದ್ರ ಕುಬೇರ ಗಣಾಧಿಪತ್ಯಾದಿ ಪದವಿಗಳಾಗಲಿ ವೈಷ್ಣವರು ಮನ್ನಿಸರು. ಸದಾ ವಿಷ್ಣುಸೇವೆಯುತವಾದ ಮೋಕ್ಷವನ್ನೇ ಭಯಸುವರು.


*ಸ ಕಿಂಗುರುಃ ಸ ಕಿಂತಾತಃ ಸ ಕಿಂಪುತ್ರಃ ಸ ಕಿಂಸಖಾ |*

*ಸ ಕಿಂರಾಜಾ ಸ ಕಿಂಬನ್ಧುರ್ನ ದದ್ಯಾದ್ಯೋ ಹರೌ ಮತಿಮ್ || ೩೮ ||*


ವಿಷ್ಣುವಿನ ಕುರಿತಾದ ತಿಳುವಳಿಕೆಯನ್ನು ನೀಡದ ಗುರು ಗುರುವಲ್ಲ, ತಂದೆ ತಂದೆಯಲ್ಲ ಮಗನು ಮಗನೆನಿಸಲಾರ, ರಾಜನು ರಾಜನಲ್ಲ  ಬಂಧುಗಳು ಬಂಧುಗಳೆನಿಸರು. 


*ವಿಷ್ಣುಭಕ್ತಿಯುತಂ ಜ್ಞಾನಂ ನೋ ದದಾತಿ ಚ ಯೋ ಗುರುಃ || ೭೦ ||*

*ಸ ರಿಪುಃ ಶಿಷ್ಯಘಾತೀ ಚ ಯತೋ ಬನ್ಧಾನ್ನ ಮೋಚಯೇತ್ |*


ವಿಷ್ಣುವಿನಭಕ್ತಿಯುತವಾದ ತಿಳುವಳಿಕೆಯನ್ನು ಕೊಡುವವನು ( *ನಾನೇ ಬ್ರಹ್ಮ, ಆ ಬ್ರಹ್ಮವು ನೀನೇ ಆಗಿದ್ದೀಯ ಇತ್ಯಾದಿ ಉಪದೇಶ ಕೊಡುವವನಲ್ಲ*) 

 ಗುರುವೆನಿಸುವರೇ ಹೊರತು ಅನ್ಯಥಾ ತಿಳುವಳಿಕೆಕೊಡುವವನು ಶತ್ರುವು ಶಿಷ್ಯನ ಹಂತಕನೆನಿಸುವನು ಮೋಕ್ಷಮಾರ್ಗದಿಂದ ವಂಚಿತನ್ನಾಗಿ ಮಾಡುವುದರಿಂದ.


*ಸ್ಮರಣಂ ಕೀರ್ತ್ತನಂ ವಿಷ್ಣೋರರ್ಚನಂ ಪಾದಸೇವನಮ್ |*

*ವನ್ದನಂ ಸ್ತವನಂ ನಿತ್ಯಂ ಭಕ್ತ್ಯಾ ನೈವೇದ್ಯಭಕ್ಷಣಮ್ || ೭೩ ||* 

*ಚರಣೋದಕಪಾನಂ ಚ ತನ್ಮಂತ್ರಜಪನಂ ಪರಮ್ |*

*ಇದಂ ನಿಸ್ತಾರಬೀಜಂ ಚ ಸರ್ವೇಷಾಮೀಪ್ಸಿತಂ ಭವೇತ್ || ೭೪ ||* 


ಹರಿಸ್ಮರಣೆ, ಹರಿನಾಮಕೀರ್ತನೆ, ಹರಿಯ ಅರ್ಚನೆ ಅವನ ಪಾದಸೇವನೆ, ಹರಿವಂದನೆ, ನಿತ್ಯ ಭಕ್ತಿಯಿಂದ ಅವನ ನೈವೇದ್ಯ ಸ್ವೀಕಾರ, ಪಾದೋದಕಪ್ರಾಶನ, ಮಂತ್ರಜಪ ಈ ನವವಿಧ ಭಕ್ತಿಯೇ ಸಂಸಾರಸಾಗರವನ್ನು ದಾಟುವ ಉಪಾಯ. ಎಲ್ಲಾ ಮುಮುಕ್ಷುಗಳೂ ಇದನ್ನೇ ಬಯಸಬೇಕು ( *ಜೀವಬ್ರಹ್ಮಾತ್ಮೈಕ್ಯವಲ್ಲ*).


*ಇದಂ ಮೃತ್ಯುಞ್ಜಯಜ್ಞಾನಂ ದತ್ತಂ ಮೃತ್ಯುಞ್ಜಯೇನ ಮೇ |* 

*ತಚ್ಛಿಷ್ಯೋಽಹಂ ಚ ನಿಶ್ಶಙ್ಕಸ್ತತ್ಪ್ರಸಾದಾಚ್ಚ ಸರ್ವತಃ || ೭೫ ||*


ಈ ಮೃತ್ಯುವನ್ನು ಜಯಿಸುವ ಜ್ಞಾನ ನನಗೆ ಮೃತ್ಯುಂಜಯನಾದ ಶಿವನಿಂದಲೇ ಬಂದಿದೆ. ನಾನು ಅವನ ಶಿಷ್ಯ. ಅವನ ಅನುಗ್ರಹದಿಂದ ನನಗೆ ಸಂಶಯಗಳು ದೂರವಾಗಿದೆ. 


*ಯತ್ಕರ್ಮ ಸಾತ್ತ್ವಿಕಂ ಕುರ್ಯ್ಯಾದಸಂಕಲ್ಪಿತಮೇವ ಚ |*

*ಸರ್ವಂ ಕೃಷ್ಣಾರ್ಪಣಂ ಕೃತ್ವಾ ಪರೇ ಬ್ರಹ್ಮಣಿ ಲೀಯತೇ || ೬೯ ||*


ಸಾತ್ವಿಕವಾದ ಸಂಕಲ್ಪಿತ ಯಾವುದೇ ಕರ್ಮವಿರಲಿ ಅದನ್ನೆಲ್ಲ ಕೃಷ್ಣಾರ್ಪಣವೆನ್ನಬೇಕು ಅದು ಆ ಪರಂಬ್ರಹ್ಮನಲ್ಲಿ ಸೇರಿದಂತೆಯೇ. 


*ಕೃಷ್ಣಾರ್ಪಣಮಸ್ತು*


ಬೆಳ್ಳೆ ಸುದರ್ಶನ ಆಚಾರ್ಯ

No comments:

Post a Comment

Earthquake in India and Speech from PM Modi - Current Affairs 2023

Introduction Natural disasters can significantly affect a country and its leadership in the dynamic world of contemporary affairs. One such ...